ಮೈಸೂರು : ಮೈಸೂರಿನ ಊಟಿ ರಸ್ತೆ ಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು ಮೊದಲಿಗೆ ಗೋಪೂಜೆಯನ್ನು ಶ್ರೀಗಳು ನೆರವೇರಿಸಿದರು.

ತರುವಾಯ ಸಾರ್ವತ್ರಿಕ ಪ್ರಾರ್ಥನಾ ಮಂದಿರದಲ್ಲಿ ನರಹರಿ ತೀರ್ಥ ಆರಾಧನಾ ಮಹೋತ್ಸವ ಹಾಗು ಶ್ರೀ ಚಕ್ರ ಪೂಜೆಯನ್ನು ಪರಮ ಪೂಜ್ಯರು ನೆರವೇರಿಸಿದರು. ಬಳಿಕ ಭಜನಾ ಸೇವೆಯನ್ನು ಅಕಿವೀಡು ಆಶ್ರಮ ಭಜನ ವೃಂದದಿಂದ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅರ್ಚಕ ಸಭಾ ಕಾರ್ಯಕ್ರಮ ನೆರವೇರಿತು. ತರುವಾಯ ಜರುಗಿದ ನರಹರಿ ತೀರ್ಥ ಆರಾಧನಾ ಕಾರ್ಯಕ್ರಮದ ಅಂಗವಾಗಿ ‘ಸ್ಮಾರ್ತ ನರಹರಿ ಪ್ರಶಸ್ತಿ’ಯನ್ನು ಶ್ರೀ ಕೊಣಾಕಾಂಚಿ ಗೋಪಾಲ ಮೂರ್ತಿ,ಅಕಿವೀಡು, ಮೈಸೂರು ಆಶ್ರಮದ ಶ್ರೀ ಮಧುಕುಮಾರ್ ಆಚಾರ್ಯ ಮತ್ತು ಬೆಂಗಳೂರು ಆಶ್ರಮದ ಶ್ರೀ ಹರಿ ಬುಡ್ಡುಅವರಿಗೆ ನೀಡಲಾಯಿತು. ಸಂಜೆ ಪೌಂಡರೀಕಾ ಮಂಟಪದಲ್ಲಿ ಜರುಗಿದ ಧರ್ಮಸಭೆಯಲ್ಲಿ ಶ್ರೀ ವಿಷ್ಣುಪುರಾಣ ಕಥಾ ಮಾಲಿಕೆಯ ಕುರಿತಾಗಿ ಪ್ರವಚನವನ್ನು ಶ್ರೀಗಳು ನೀಡಿದರು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಆಗಮಿಸಿ ವಿಷ್ಣುಪುರಾಣ ಕಥೆಯನ್ನ ಆಲಿಸಿ ಭಕ್ತಿ ಭಾವದಲ್ಲಿ ಪರವಶರಾದರು.







