ಮೈಸೂರು : ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ವೈಭವವಾಗಿ ಆಚರಿಸಲಾಯಿತು.

ಮೊದಲಿಗೆ ಶ್ರೀಗಳಿಂದ ಗೋಪೂಜೆ ನಂತರ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಗೆ ಅಭಿಷೇಕವು ನೆರವೇರಿತು. ತರುವಾಯ ವಿಶ್ವ ಪ್ರಾರ್ಥನಾ ಮಂದಿರದಲ್ಲಿ ವೈದ್ಯ ಫಣಿಶ್ರೀ ಮತ್ತು ಅವರ ಶಿಷ್ಯರಿಂದ ವೇಣು ನಾದ ಸೇವೆಯೊಂದಿಗೆ ಅನಘಾಷ್ಟಮಿ ವ್ರತ ಪೂಜೆ ವಿಶೇಷವಾಗಿ ಜರುಗಿತು. ಸಂಜೆ ಪೌಂಡರೀಕಾ ಮಂಟಪದಲ್ಲಿ ಭಜನಾ ಕಾರ್ಯಕ್ರಮ ನೆರವರಿತು. ತದನಂತರ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಮೈಸೂರಿನ ಭಜನಾ ತಂಡದಿಂದ ಭಜನಾ ಸೇವೆಯೊಂದಿಗೆ ನಿಶೀತಿ ಕಾಲ ಶ್ರೀ ಕೃಷ್ಣ ಪೂಜೆ ವಿಶೇಷವಾಗಿ ನೆರವೇರಿತು.ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಆಗಮಿಸಿ ಶ್ರೀ ಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಭಕ್ತಿ ಪರವಶರಾದರು



















