ಮೈಸೂರು : ಮೈಸೂರಿನ ಊಟಿ ರಸ್ತೆ ಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು ಮೊದಲಿಗೆ ಶ್ರೀಗಳಿಂದ ಗೋಪೂಜೆ ನೆರವೇರಿತು.

ತರುವಾಯ ಸಾರ್ವತ್ರಿಕ ಪ್ರಾರ್ಥನಾ ಮಂದಿರದಲ್ಲಿ ಶ್ರಾವಣ ಶುಕ್ರವಾರ ಪ್ರಯುಕ್ತ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ಗೆ ವಿಶೇಷ ಅಭಿಷೇಕ ಮತ್ತು ಶ್ರೀ ಚಕ್ರ ಪೂಜೆ ಪೂಜೆಯನ್ನು ಪರಮ ಪೂಜ್ಯರು ನೆರವೇರಿಸಿದರು. ತರುವಾಯ ನೆರವೇರಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಮ್ಮನವರಿಗೆ ವಿಷೇಶ ಪೂಜೆ ಹಾಗು ವರ ಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ US ನಿಂದ ಆಗಮಿಸಿದ್ದ ಚಿ. ವಿದ್ಯುತ್ ಅವರಿಂದ ಸಂಗೀತ ಸೇವೆ ನೆರವೇರಿಸಿದರು. ಬಳಿಕ ದತ್ತ ಯಾಗವು ನಾದ ಮಂಟಪದಲ್ಲಿ ವಿಶೇಷವಾಗಿ ಜರುಗಿತು.ಸಂಜೆ ಪೌಂಡರೀಕಾ ಮಂಟಪದಲ್ಲಿ ಜರುಗಿದ ಧರ್ಮಸಭೆಯಲ್ಲಿ ಶ್ರೀ ವಿಷ್ಣುಪುರಾಣ ಕಥಾ ಮಾಲಿಕೆಯ ಕುರಿತಾಗಿ ಪ್ರವಚನವನ್ನು ಶ್ರೀಗಳು ನೀಡಿದರು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಆಗಮಿಸಿ ವಿಷ್ಣುಪುರಾಣ ಕಥೆಯನ್ನ ಆಲಿಸಿ ಭಕ್ತಿ ಭಾವದಲ್ಲಿ ಲೀನರಾದರು.




