ಮೈಸೂರು : ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು ಮೊದಲಿಗೆ ಶ್ರೀಗಳಿಂದ ಗೋಪೂಜೆ ನೆರವೇರಿತು.

ತರುವಾಯ ಶ್ರೀ ಚಕ್ರ ಪೂಜೆ ಹಾಗು ಶ್ರೀ ಸಚ್ಚಿದಾನಂದೇಶ್ವರ ಸ್ವಾಮಿಗೆ ಏಕಾದಶ ರುದ್ರಾಭಿಷೇಕ ಪರಮ ಪೂಜ್ಯರಿಂದ ನೆರವೇರಿತು. ಬಳಿಕ ರುದ್ರ ಹೋಮವನ್ನು ನೆರವೇರಿಸಿ ಪೂರ್ಣಾಹುತಿಯನ್ನು ಮಾಡಲಾಯಿತು.ಸಂಜೆ ಪೌಂಡರೀಕಾ ಮಂಟಪದಲ್ಲಿ ಜರುಗಿದ ಧರ್ಮಸಭೆಯಲ್ಲಿ ಶ್ರೀ ವಿಷ್ಣುಪುರಾಣ ಕಥಾ ಮಾಲಿಕೆಯ ಕುರಿತಾಗಿ ಪ್ರವಚನವನ್ನು ಶ್ರೀಗಳು ನೀಡಿದರು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಆಗಮಿಸಿ ವಿಷ್ಣುಪುರಾಣ ಕಥೆಯನ್ನ ಆಲಿಸಿ ಪುಳಕಿತರಾದರು.




