ಮೈಸೂರು : ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು ಶ್ರಾವಣ ಏಕಾದಶಿ ಹಬ್ಬವನ್ನು ನೆರವೇರಿಸಲಾಯಿತು.

ಮೊದಲಿಗೆ ಶ್ರೀಗಳಿಂದ ಗೋಪೂಜೆ ನೆರವೇರಿತು.ಇದೇ ಸಂದರ್ಭದಲ್ಲಿ ಮೈಸೂರು ಭಜನಾ ತಂಡದಿಂದ ಭಜನಾ ಸೇವೆಯೊಂದಿಗೆ ಶ್ರೀ ಚಕ್ರ ಪೂಜೆಯನ್ನು ಪರಮ ಪೂಜ್ಯರಿಂದ ನೆರವೇರಿತು. ನಾದ ಮಂಟಪದಲ್ಲಿ ವಿಶೇಷವಾಗಿ ಜರುಗುತಿದ್ದ ದತ್ತ ಯಾಗವು ಮಹಾ ಪೂರ್ಣಾಹುತಿಯೊಂದಿಗೆ ಸಂಪನ್ನವಾಗಿದ್ದು ಬಳಿಕ ಶ್ರೀಗಳ ಘನ ಉಪಸ್ಥಿತಿಯಲ್ಲಿ ಸಂಪೂರ್ಣ ಶ್ರೀ ನಾರಾಯಣೀಯಂ ಪಾರಾಯಣ ಮಾತೆಯರಿಂದ ವಿಶೇಷವಾಗಿ ನೆರವೇರಿತು. ಸಂಜೆ ಪೌಂಡರೀಕಾ ಮಂಟಪದಲ್ಲಿ ಜರುಗಿದ ಧರ್ಮಸಭೆಯಲ್ಲಿ ಶ್ರೀ ವಿಷ್ಣುಪುರಾಣ ಕಥಾ ಮಾಲಿಕೆಯ ಕುರಿತಾಗಿ ಪ್ರವಚನವನ್ನು ಶ್ರೀಗಳು ನೀಡಿದರು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಆಗಮಿಸಿ ವಿಷ್ಣುಪುರಾಣ ಕಥೆಯನ್ನ ಭಕ್ತಿ ಪರವಶರಾದರು.



