ಮೈಸೂರು : ಮೈಸೂರಿನ ಊಟಿ ರಸ್ತೆ ಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು ಮೊದಲಿಗೆ ಗೋಪೂಜೆಯನ್ನು ಶ್ರೀಗಳು ನೆರವೇರಿಸಿದರು.

ತರುವಾಯ ಶ್ರೀ ಚಕ್ರ ಪೂಜೆಯನ್ನು ಪ್ರಾಥನಾ ಮಂದಿರದಲ್ಲಿ ಪರಮ ಪೂಜ್ಯರು ನೆರವೇರಿಸಿದರು , ಬಳಿಕ ಭಜನಾ ಸೇವೆಯನ್ನು ಬಿ.ಎಚ್. ಈ. ಎಲ್ ಭಜನಾ ವೃಂದದಿಂದ ಭಜನಾ ಸೇವೆಯು ನೆರವೇರಿತು. ಇದೇ ಸಂದರ್ಭದಲ್ಲಿ ಶ್ರೀ ಸ್ವಾಮೀಜಿಯವರು ‘ಐಕ್ಯಮ್ನ ಜೀಲೋ ರೈಸ್’ (ಮಧುಮೇಹಿಗಳಿಗಾಗಿ ವಿಶೇಷ ಅಕ್ಕಿ) ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಜೆ ಪೌಂಡರೀಕಾ ಮಂಟಪದಲ್ಲಿ ಜರುಗಿದ ಧರ್ಮಸಭೆಯಲ್ಲಿ ಶ್ರೀ ವಿಷ್ಣುಪುರಾಣ ಕಥಾ ಮಾಲಿಕೆಯ ಕುರಿತಾಗಿ ಪ್ರವಚನವನ್ನು ಶ್ರೀಗಳು ನೀಡಿದರು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಆಗಮಿಸಿ ವಿಷ್ಣುಪುರಾಣ ಕಥೆಯನ್ನ ಆಲಿಸಿ ಭಕ್ತಿ ಪರವಶರಾದರು.

.





