ಮೈಸೂರಿನ ಊಟಿ ರಸ್ತೆ ಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು ಮೊದಲಿಗೆ ಗೋಪೂಜೆಯನ್ನು ಶ್ರೀಗಳು ನೆರವೇರಿಸಿದರು.











ತರುವಾಯ ವಿಶ್ವ ಪ್ರಾರ್ಥನಾ ಮಂದಿರದಲ್ಲಿ ನೆಲ್ಲೂರಿನ ಕುಮಾರಿ ಸರ್ವಪಲ್ಲಿ ರಾಜಲಕ್ಷ್ಮಿಯವರಿಂದ ಸಂಗೀತ ಸೇವೆಯೊಂದಿಗೆ ಶ್ರೀ ಚಕ್ರ ಪೂಜೆಯನ್ನು ಪರಮ ಪೂಜ್ಯರು ನೆರವೇರಿಸಿದರು. ಸಂಜೆ ಪೌಂಡರೀಕಾ ಮಂಟಪದಲ್ಲಿ ಜರುಗಿದ ಧರ್ಮಸಭೆಯಲ್ಲಿ ಶ್ರೀ ವಿಷ್ಣುಪುರಾಣ ಕಥಾ ಮಾಲಿಕೆಯ ಕುರಿತಾಗಿ ಪ್ರವಚನವನ್ನು ಶ್ರೀಗಳು ನೀಡಿದರು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಆಗಮಿಸಿ ವಿಷ್ಣುಪುರಾಣ ಕಥೆಯನ್ನ ಆಲಿಸಿ ಭಕ್ತಿ ಭಾವದಲ್ಲಿ ಪರವಶರಾದರು.

