ಮೈಸೂರು : ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು. ಮೊದಲಿಗೆ ಶ್ರೀಗಳಿಂದ ಗೋಪೂಜೆ ನೆರವೇರಿತು.

ಇದೇ ಸಂದರ್ಭದಲ್ಲಿ ಕಡಪ ಆಶ್ರಮದ ಭಜನಾ ತಂಡದಿಂದ ಭಜನಾ ಸೇವೆಯೊಂದಿಗೆ ಶ್ರೀ ಚಕ್ರ ಪೂಜೆಯನ್ನು ಪರಮ ಪೂಜ್ಯರಿಂದ ನೆರವೇರಿತು. ತರುವಾಯ ಮೈಸೂರು ನಗರದ ಸುತ್ತೂರು ಮಠದಲ್ಲಿ ಜರುಗಿದ ಡಾ. ಶ್ರೀ ಶಿವರಾಜೇಂದ್ರ ಮಹಾಸ್ವಾಮೀಜಿಯವರ 111ನೇ ಜಯಂತೋತ್ಸವ ಸಮಾರಂಭದಲ್ಲಿ ಶ್ರೀ ಸ್ವಾಮೀಜಿಯವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ಹಾಗು ಇನ್ನಿತರ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ಪೌಂಡರೀಕಾ ಮಂಟಪದಲ್ಲಿ ಜರುಗಿದ ಧರ್ಮಸಭೆಯಲ್ಲಿ ಶ್ರೀ ವಿಷ್ಣುಪುರಾಣ ಕಥಾ ಮಾಲಿಕೆಯ ಕುರಿತಾಗಿ ಪ್ರವಚನವನ್ನು ಶ್ರೀಗಳು ನೀಡಿದರು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಆಗಮಿಸಿ ವಿಷ್ಣುಪುರಾಣ ಕಥೆಯನ್ನ ಭಕ್ತಿ ಪರವಶರಾದರು.



















