ಮೈಸೂರು : ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳ 23ನೇ ಚಾತುರ್ಮಾಸ್ಯ ವೈಭವವಾಗಿ ನೆರವೇರುತ್ತಿದ್ದು ಮೊದಲಿಗೆ ಶ್ರೀಗಳಿಂದ ಗೋಪೂಜೆ ನೆರವೇರಿತು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಭಕ್ತರಿಂದ ಶ್ರೀ ನಾರಾಯಣೀಯಂ ಪಾರಾಯಣ ಸೇವೆಯೊಂದಿಗೆ ಶ್ರೀ ಚಕ್ರ ಪೂಜೆಯನ್ನು ಪರಮ ಪೂಜ್ಯರಿಂದ ನೆರವೇರಿತು.ನಂತರ ಸಾರ್ವತ್ರಿಕ ಪ್ರಾರ್ಥನಾ ಮಂದಿರದಲ್ಲಿ ಕಾಳಾಗ್ನಿ ಶಾಮನ ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ ಹಾಗು ಹೈದರಾಬಾದ್ನ ಭಕ್ತರಿಂದ ಬತುಕಮ್ಮ ಆಚರಣೆ ವಿಶೇಷವಾಗಿ ನೆರವೇರಿತು. ಇದೆ ಸುಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮೀಜಿಯವರಿಗೆ ಸ್ವಾಗತ ಸಭೆಯನ್ನು ಆಚರಿಸಲಾಯಿತು. ಸಾವಿರಾರು ಭಕ್ತರು ಪೂಜ್ಯರ ದರ್ಶನ ಪಡೆದು ಪುನೀತರಾದರು
















